ತುಪ್ಪಳ
 	ಕೆಲವು ಪ್ರಾಣಿಗಳ ಸಣ್ಣನೆಯ ದಟ್ಟವಾದ ನವಿರು ಕೂದಲಿನ ಮೇಲ್ಮೈಹೊದಿಕೆ (ಫರ್) ಇದರಿಂದ ಅಯಾ ಪ್ರಾಣಿಗಳಿಗೆ ಚಳಿ, ಗಾಳಿ ಮತ್ತು ಮಳೆಗಳಿಂದ ರಕ್ಷಣೆ ದೊರೆಯುವುದು. ಮಾನವನಿಂದ ತುಪ್ಪಳದ ಬಳಕೆ ಅತನ ಉಗಮದಿಂದಲೇ ಅರಂಭವಾಯಿತೆನ್ನಬಹುದು. ಪ್ರಾಚೀನ ಮಾನವನಿಗೆ ಅಹಾರ ಮತ್ತು ರಕ್ಷಣೆ ಬಹಳ ಮುಖ್ಯ ಅಗತ್ಯಗಳಾಗಿದ್ದವು. ಅತ ಪ್ರಾಣಿಗಳ ಮಾಂಸವನ್ನು ಅಹಾರವನ್ನಾಗಿಯೂ ತುಪ್ಪಳ ಮತ್ತು ಚರ್ಮವಗಳನ್ನು ದೇಹರಕ್ಷಣೆಯ ಸಾಧನಗಳನ್ನಾಗಿಯೂ ಬಳಸಲು ಅರಂಭಿಸಿದ.

  ಅಲ್ಲದೆ ಪ್ರತಿಯೊಂದು ನಾಗರಿಕತೆಯಲ್ಲೂ ತುಪ್ಪಳ ಒಂದು ಅಲಂಕಾರ ಸಾಧನವಾಗಿ ಉಪಯೋಗದಲ್ಲಿತ್ತು. ಚೀನೀಯರು ಇದನ್ನು 3.500 ವರ್ಷಗಳ ಹಿಂದಯೇ ಬಳಸುತ್ತಿದ್ದರು. ರೋಮನ್ನರು ತುಪ್ಪಳವನ್ನು ಒಂದು ಘನತೆಯ ಸಂಕೇತವಾಗಿ ಉಪಯೋಗಿಸುವುದನ್ನು ಗ್ರೀಕರಿಂದ ಕಲಿತರು.

  ತುಪ್ಪಳ ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ಗುಣಗಳಿರಬೇಕು :
  1 ಅದು ಸಸ್ತನಿಯ ಚರ್ಮದ ಕೂದಲಿನ ಮೇಲುಹೊದಿಕೆಯಾಗಿರಬೆಕು.
  2 ಬೆಚ್ಚನೆಯ ಸಾಧನವಾಗಿ ಬಳಕೆಯಾಗಬೇಕು.
  3 ವಾಣಿಜ್ಯೋದ್ಯಮದಲ್ಲಿ ಉಡುಗೆ ತೊಡಿಗೆಗಳಾಗಿ ಉಪಯೋಗವಾಗಬೇಕು.

  ಈ ಮೂರು ಗುಣಗಳು ತುಪ್ಪಳದ ಉದ್ಯಮದಲ್ಲಿ ಬಹಳ ಮುಖ್ಯ. ತುಪ್ಪಳದ ಮೇಲೆ ವಿಧಿಸುವ ಕರಗಳು ಕೂಡ ಈ ಅಂಶಗಳನ್ನೇ ಅವಲಂಬಿಸಿರುತ್ತವೆ.

  ತುಪ್ಪಳ ಪ್ರಾಣಿಗಳು : ಮೂರು ವಿಧದ ಪ್ರಾಣಿಗಳು ತುಪ್ಪಳ ಒದಗಿಸುತ್ತವೆ. ಕಾಡುಪ್ರಾಣಿಗಳು, ಮುದ್ದಿನ ಪ್ರಾಣಿಗಳು ( ಪೆಟ್ಸ್) ಮತ್ತು ಸಾಕುಪ್ರಾಣಿಗಳು. ಕಾಡುಪ್ರಾಣಿಗಳ ಕೂದಲ ಹೊದಿಕೆಯಲ್ಲಿ ಎರಡು ವಿಧದ ಕೂದಲು ಉಂಟು : ರಕ್ಷಕ ರೋಮ ಮತ್ತು ತುಪ್ಪಳ ರೋಮ (ಗಾರ್ಡ ಹೇರ್ ಅಂಡ್ ಫರ್ ಹೇರ್) . ರಕ್ಷಕ ರೋಮಗಳು ಉದ್ದವಾಗಿಯೂ ಒರಟಾಗಿಯೂ ಇದ್ದು ಮಳೆ ಮತ್ತು ಗಾಳಿಗಳಿಂದ ರಕ್ಷಣೆ ಕೊಡುತ್ತವೆ. ಅಗಾಗ್ಗೆ ಬಿದ್ದುಹೋಗುತ್ತಿದ್ದು ಅವುಗಳ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ತುಪ್ಪಳ ರೋಮ ಗಿಡ್ಡವಾಗಿಯೂ ನವಿರಾಗಿಯೂ ಇದ್ದು ಪ್ರಾಣಿಯ ದೇಹವನ್ನು ಚಳಿಯಿಂದ ರಕ್ಷಿಸುತ್ತದೆ.

    ಮುದ್ದಿನ ಪ್ರಾಣಿಗಳ ಗುಂಪಿಗೆ ನಾಯಿ, ಬೆಕ್ಕು ಮತ್ತು ಮಿಂಕ್. ಬೆಳ್ಳಿನರಿ (ಸಿಲ್ವರ್ ಫಾಕ್ಸ್) ಮುಂತಾದವು ಸೇರಿವೆ. ತುಪ್ಪಳಕ್ಕೋಸ್ಕರವೇ ಫಾರ್ಮ್‍ಗಳಲ್ಲಿ ಇವನ್ನು ಸಾಕುವುದುಂಟು.  ಈ ಪ್ರಾಣಿಗಳಲ್ಲಿ ಕೂಡ ಎರಡು ವಿಧದ ಕೂದಲು ಇರುತ್ತದೆ.

  ಸಾಕುಪ್ರಾಣಿಗಳಾದ ಕುರಿ ಮತ್ತು ಮೇಕೆ ಇತ್ಯಾದಿಗಳು ಸಹ ಉಣ್ಣೆಯನ್ನು ಒದಗಿಸುತ್ತವೆ.

 	ವಿವಿಧ ಭೌಗೋಳಿಕ ವಲಯಗಳಲ್ಲಿ ವಾಸಿಸುವ ಪ್ರಾಣಿಗಳಲ್ಲಿ ವಿವಿಧ ರೀತಿಯ, ವಿವಿಧ ಸಾಂದ್ರತೆಯುಳ್ಳ ಮತ್ತು ವಿವಿಧ ನವಿರಿನ ತುಪ್ಪಳವನ್ನು ಕಾಣಬಹುದು. ಇದು ಪ್ರಾಣಿಯ ದೇಹಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ಇಂಥ ವಲಯಗಳಲ್ಲಿ ಪ್ರಮುಖವಾಗಿ ಹೆಸರಿಸಬಹುದಾದವು : ಉತ್ತರ ಮೇರು ಪ್ರದೇಶ, ಉತ್ತರ ಮತ್ತು ದಕ್ಷಿಣ ಶಿತವಲಯ ಮತ್ತು ಉತ್ತರ ಮತ್ತು ದಕ್ಷಿಣ ಸಮಶೀತೋಷ್ಣವಲಯ. ದಕ್ಷಿಣ ಮೇರು ವಲಯದಲ್ಲಿ ತುಪ್ಪಳ ಕೈಗಾರಿಕೆಗೆ ಉಪಯೋಗಿಸುವಂಥ ತುಪ್ಪಳ ದೊರೆಯುವುದಿಲ್ಲ.

	 ತುಪ್ಪಳ ಗುಣನಿಯಂತ್ರಣದಲ್ಲಿ ಮುಖ್ಯವಾದ ಅಂಶಗಳು : (ಚಿ) ಗಾತ್ರ ವ್ಯತ್ಯಾಸಗಳು : ತುಪ್ಪಳದ ಗುಣ, ವಿನ್ಯಾಸ ಮತ್ತು ನವಿರಿನ ಮಟ್ಟವನ್ನು ಕಾಪಾಡುವುದರಲ್ಲಿ ಅಯಾ ಪ್ರದೇಶದ ವಾಯುಗುಣದ ಪಾತ್ರ ಬಹಳ ಹಿರಿದು. ಚಳಿ ಪ್ರದೇಶದಲ್ಲಿ ತುಪ್ಪಳ ಉಷ್ಣಪ್ರದೇಶದ್ದಕ್ಕಿಂತ ಬಹಳ ಸಾಂದ್ರವೂ ಉದ್ದವೂಇರುತ್ತದೆ. ಉಷ್ಣಪ್ರದೇಶದಲ್ಲಿ ಚಳಿಗಾಲ ಕಡಿಮೆ ಮತ್ತು ಸೌಮ್ಯವಾಗಿರುವುದರಿಂದ ತುಪ್ಪಳ ದಟ್ಟವಾಗಿದರೆ, ನೋಟಕ್ಕೋಸ್ಕರ ಮಾತ್ರ ಇರುವುದುಂಟು. ಉದಾಹರಣೆಗೆ ಚಿರತೆ (ಲೆಪರ್ಡ್) ಜಾತಿಗೆ ಸೇರಿದ ಪ್ರಾಣಿಗಳು.

  (b) ಬಣ್ಣ ವ್ಯತ್ಯಾಸಗಳು : ತುಪ್ಪಳದಲ್ಲಿ ಕಂಡುಬರುವ ಬಣ್ಣವತ್ಯಾಸಗಳು ಪ್ರಾಣಿಗಳು ವಾಸಿಸುವ ಪರಿಸರ ಮತ್ತು ವಾಯುಗುಣವನ್ನು ಅವಲಂಬಿಸಿರುತ್ತವೆ. ಕೂದಲಿನ ಒಳರಚನೆಯಲ್ಲಿ ಹುದುಗಿರುವ ವರ್ಣಕಗಳ ಬಗೆ, ಗಾತ್ರ ಮತ್ತು ಸಾಂದ್ರತೆಗಳಲ್ಲಿ ವ್ಯತ್ಯಾಸವಿರುವುದರಿಂದ ಕೂದಲಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ವಿವಿಧ ಬಣ್ಣದ ಹೊಳಹು ಉಂಟಾಗುತ್ತದೆ. ಬಣ್ಣ ತಿಳಿಹಳದಿಯಿಂದ ಬುದುಬಣ್ಣದ ವರೆಗೆ ವ್ಯತ್ಯಾಸವಾಗಬಹುದು. ಕೂದಲಿನ ಬಣ್ಣ ಪ್ರಾಣಿಗಳು ತಿನ್ನುವ ಅಹಾರ ಕುಡಿಯುವ ನೀರನ್ನು ಕೂಡ ಅವಲಂಬಿಸಿರುತ್ತದೆ. ಭೂಗುಣವೂ ಪರೋಕ್ಷ ರೀತಿಯಲ್ಲಿ ಪ್ರಭಾವ ಬೀರಬಹುದು. ಉದಾಹರಣೆಗೆ ವಾಯುವ್ಯ ಅಮೆರಿಕದ ಪ್ರಾಣಿಗಳ ತುಪ್ಪಳದ ಬಣ್ಣ ನೀಲಿಮಿಶ್ರಿತ ಹಸಿರಾಗಿರುತ್ತದೆ. ಕಾರಣ ಇಲ್ಲಿನ ಮಣ್ಣು ಸುಣ್ಣಕಲ್ಲು (ಕರಲು) ಮಿಶ್ರಿತ. ಉತ್ತರ ಅಮೆರಿಕದ ಕರಾವಳಿ ಪ್ರದೇಶದಲ್ಲಿ ಕಿತ್ತಳೆ ಬಣ್ಣ ಮಿಶ್ರಿತ ತುಪ್ಪಳ ಹೆಚ್ಚು. ಚೀನ ಮತ್ತು ಜಪಾನ್‍ಗಳಲ್ಲಿ ಹಳದಿ ಮತ್ತು ಬೂದುಮಿಶ್ರಿತ ಹಳದಿ ಸಾಮಾನ್ಯ. ತಂಪು ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಗಳ ಕೂದಲಿನ ವರ್ಣದ ಸಾಂದ್ರತೆ ಜಾಸ್ತಿಯಾಗಿರುವುದರಿಂದ ತುಪ್ಪಳದ ಬಣ್ಣ ಹೆಚ್ಚು ಗಾಡವಾದ್ದು. ಒಣಪ್ರದೇಶದ ಪ್ರಾಣಿಗಳ ರೋಮಗಳಲ್ಲಿ ವರ್ಣಕ ಕಡಿಮೆ ಪ್ರಮಾಣದಲ್ಲಿರುವುದರಿಂದ ತುಪ್ಪಳ ತಿಳಿಬಣ್ಣದ್ದು ಇಲ್ಲವೆ ಬಣ್ಣದ್ದಾಗಿರುವುದು.

  (ಛಿ) ಶ್ರಾಯಕ ಬದಲಾವಣೆಗಳು (ಸೀಸನಲ್ ಚೇಂಜಸ್) : ಒಂದು ಶ್ರಾಯದಿಂದ (ಸೀಸನ್) ಮತ್ತೊಂದು ಶ್ರಾಯಕ್ಕೆ ಬದಲಾಗುವ ಹವಾಗುಣ ಕೂಡ ತುಪ್ಪಳದ ಗುಣದ ಮೇಲೆ ಪ್ರಭಾವ ಬೀರುತ್ತದೆ. ವಸಂತ ಋತುವಿನಲ್ಲಿ ಕೂದಲು ಕಳಚುವಿಕೆ (ಮೋಲ್ಟಿಂಗ್) ಮತ್ತು ರಕ್ಷಕ ರೋಮದ ಉದ್ದ ಹೆಚ್ಚಾಗಿರುವುದರಿಂದ ಮಳೆಯಿಂದ ರಕ್ಷಣೆ ಸಿಗುತ್ತದೆ.

	ಶ್ರಾಯಕ ಬದಲಾವಣೆಗಳು ಸಮಶೀತೋಷ್ಣವಲಯಗಳಲ್ಲಿ ಹೆಚ್ಚು. ಮೇರು ಪ್ರದೇಶದಲ್ಲಿ ತುಪ್ಪಳ ವರ್ಷದ ಹೆಚ್ಚುಕಾಲ ದಟ್ಟವಾಗಿಯೇ ಇರುತ್ತದೆ ಮತ್ತು ಉಷ್ಣವಾತಾವರಣ ಪ್ರಾರಂಭವಾದಂತೆ ಕಳಚುವಿಕೆ ಪ್ರಾರಂಭವಾಗುತ್ತದೆ. ಉಷ್ಣವಲಯಗಳಲ್ಲಿ ಉಷ್ಣತೆಯ ಬದಲಾವಣೆ ಹೆಚ್ಚಾಗಿಲ್ಲದ ಕಾರಣ ತುಪ್ಪಳದ ಬೆಳೆವಣಿಗೆ ಕಡಿಮೆ ಇರುತ್ತದೆ. ಆದರ ರಕ್ಷಕ ರೋಮಗಳು ಹೆಚ್ಚಾಗಿರುವುವು. 

  ಗೊರಸುಳ್ಳ ಪ್ರಾಣಿಗಳ ತುಪ್ಪಳದಲ್ಲಿ ಯಾವ ವಿಧವಾದ ಬದಲಾವಣೆಗಳೂ ಕಂಡುಬರುವುದಿಲ್ಲ.
  (ಜ) ತುಪ್ಪಳದ ಮೂಲಗಳು : ತುಪ್ಪಳ ಉದ್ಯಮದಲ್ಲಿ ತುಪ್ಪಳ ಪ್ರಾಣಿಗಳನ್ನು ಈ ಮೂರು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ.
   ರಾಡೆನ್ಷಿಯ       ಉದಾಹರಣೆ    ಮೊಲ
   ಕ್ಯಾನಿಡೀ              	     ನಾಯಿ
   ಫೀಲಿಡೀ	                ಬೆಕ್ಕು, ಹುಲಿ
   ಮಸ್ಟೆಲಿಡೀ                   ವೀಸಲ್
   ಮಾಸ್ರ್ಯುಪಿಯೇಲಿಯ           ಕಾಂಗರೂ
   ಆಂಗ್ಯುಲೇಟ್                  ಕುದುರೆ, ಜಿಂಕೆ
   ಪ್ಲಾಂಟಿಗ್ರೇಡ್                ಕರಡಿ, ರಕೂನ್
   ಇತರ ಗುಂಪುಗಳು              ಸೀಲ್ ಇತ್ಯಾದಿ
 	ಉ. ಅಮೆರಿಕ ; ಉ. ಅಮೆರಿಕದ ದೊಡ್ಡ ಗಾತ್ರದ ತುಪ್ಪಳಪ್ರಾಣಿಗಳಲ್ಲಿ ಮುಖ್ಯವಾದವು - ಕಸ್ತೂರಿ ಇಲಿ (ಮಸ್ಕ್, ರ್ಯಾಟ್), ಬೀವರ್, ಸ್ಕಂಕ್, ರಕೈನ್, ಒಪಾಸಮ್ ಮತ್ತು ಮಿಂಕ್.

 	ಸಣ್ಣಗಾತ್ರದ ಪ್ರಾಣಿಗಳಲ್ಲಿ ಲಿಂಕ್ಸ್ ಬೆಕ್ಕು, ಮಾರ್ಟನ್, ನೀಲಿನರಿ, ಬಿಳಿನರಿ, ಬೂದುನರಿ, ನೀರುನಾಯಿ, ತುಪ್ಪಳ ಸೀಲ್, ಹೇರ್‍ಸೀಲ್, ಅಳಿಲು, ಇತ್ಯಾದಿ. ಇವುಗಳಲ್ಲಿ ಅನೇಕ ಪ್ರಾಣಿಗಳನ್ನು ಸಾಕುವುದೂ ಉಂಟು.

	ಯುರೋಪ್ : ಯುರೋಪಿನ ಉತ್ತರ ಭಾಗಗಳಲ್ಲಿ ಬಿಳಿನರಿ, ಕೆಂಪುನರಿ, ತೋಳ ಮತ್ತು ವೀಸಲ್‍ಗಳು ಮುಖ್ಯವೆನಿಸಿವೆ. ಇತ್ತೀಚೆಗೆ ಅಮೆರಿಕದಿಂದ ಕಸ್ತೂರಿ ಇಲಿಗಳನ್ನು ತಂದು ಸಾಕಲಾಗಿದೆ. ದಕ್ಷಿಣ ಪ್ರಾಂತ್ಯಗಳಲ್ಲಿ ಕೆಂಪುನರಿ, ಬಾಮ್ ಮಾರ್ಟನ್, ಸ್ಟೋನ್ ಮಾರ್ಟನ್ ಮತ್ತು ಮಾರ್ಮಟ್ ಮತ್ತು ಮೊಲಗಳಿಂದ ಕೂಡ ಸಾಕಷ್ಟು ತುಪ್ಪಳ ಪಡೆಯಲಾಗುತ್ತದೆ.

 	ಏಷ್ಯಾ : ಏಷ್ಯಾದಲ್ಲಿ ಉತ್ಪತ್ತಿಯಾಗುವ ಅನೇಕ ವಿಧದ ತುಪ್ಪಳ ಪ್ರಮುಖವಾಗಿ ಅಳಿಲು, ಕೆಂಪುನರಿ, ಬಿಳಿನರಿ, ಬಾಮ್ ಮಾರ್ಟನ್, ಜಾಪ್ ಮಾರ್ಟನ್, ಮಾರ್ಮಟ್, ಪರ್ಷಿಯಾ ಕುರಿ, ಕಾರಕುಲ್, ಮುಂತಾದವುಗಳಿಂದ ಬರುತ್ತದೆ. ಕೊಂಚ ಪ್ರಮಾಣದಲ್ಲಿ ನೀರುನಾಯಿ, ಏಷ್ಯದ ರಕೂನ್, ಸೇಬಲ್ ಹಾರುವ ಅಳಿಲು, ಎರ್ಮಿನ್, ಲಿಂಕ್ಸ್, ಚಿರತೆ, ನರಿ, ತುಪ್ಪಳಸೀಲ್, ಮತ್ತು ತೋಳಗಳಿಂದಲೂ ತುಪ್ಪಲ ತೆಗೆಯುವುದುಂಟು.

	ಅಸ್ಟ್ರೇಲಿಯ : ಅಸ್ಟ್ರೇಲಿಯದ ತುಪ್ಪಳ ಕಾಡುಮೊಲಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಸಿಗುತ್ತದೆ. ಕಡಿಮೆ ಪ್ರಮಾಣದಲ್ಲಿ ವಾಲಬಿ, ಅಸ್ಟ್ರೇಲಿಯದ ಒಪಾಸಮ್‍ಗಳನ್ನು ಕೂಡ ತುಪ್ಪಳಕ್ಕೆ ಉಪಯೋಗಿಸುವುದುಂಟು.

	ಅಫ್ರಿಕ : ಅಫ್ರಿಕದ ತುಪ್ಪಳ ಪ್ರಾಣಿಗಳು ವಿವಿಧ ತೆರನ ಕೆಂಪುನರಿ ಮತ್ತು ಇತರ ನರಿಗಳು, ಚಿರತೆ ಜಾತಿಗೆ ಸೇರಿದ ಪ್ರಾಣಿಗಳು, ಕೋತಿಗಳು ಮತ್ತು ಸೀಲ್‍ಗಳು.

	ತುಪ್ಪಳ ಉದ್ಯಮ ಮತ್ತು ಅದರ ಇತಿಹಾಸ : ತುಪ್ಪಳ ಉದ್ಯಮ ಮೂಲತಃ ಪ್ರಪಂಚದ ಉತ್ತರಾರ್ಧಕ್ಕೆ ಸೀಮಿತವಾಗಿತ್ತು. ಕಾರಣ ಅಲ್ಲಿನ ಪ್ರಾಣಿಗಳು ಪ್ರಪಂಚದ ಬೇರೆಡೆಗಿಂತ ಹೆಚ್ಚಿನ ತುಪ್ಪಳ ಒದಗಿಸುವಂಥವು. ಅದ್ದರಿಂದ ಬೇಡಿಕೆ ಹೆಚ್ಚಾಗುತ್ತ ಹೋಯಿತು. ಐತಿಹಾಸಿಕ ದೃಷ್ಟಿಯಿಂದ ನೋಡಿದಾಗ, ತುಪ್ಪಳದ ಉದ್ಯಮ ಹನ್ನೊಂದನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ಯೂರೋಪಿನ ಭೌಗೋಳಿಕ ಮತ್ತು ವಾಣಿಜ್ಯ ವಿಸ್ತರಣೆಯೊಂದಿಗೇ ಹೊಂದಿಕೊಂಡು ಹೋಗುತ್ತದೆ. ರಷ್ಯದಲ್ಲೂ ತುಪ್ಪಳ ಉದ್ಯಮದ ದಾಖಲೆಗಳು ಸಿಕ್ಕಿವೆ. ಆದರೆ 19ನೆಯ ಶತಮಾನದ ಉತ್ತರಾರ್ಧದ ಹೊತ್ತಿಗೆ, ಸೈಬೀರಿಯ ಅಲಾಸ್ಕ ಕೆನಡ ಮತ್ತು ಅಮೆರಿಕದಲ್ಲಿ ತುಪ್ಪಳ ಉದ್ಯಮ ಕೊನೆಗೊಂಡಿತೆಂದೇ ಹೇಳಬೇಕು. ಅದನ್ನು ಈ ಕೆಳಕಂಡಂತೆ ಹೇಳಬಹುದು.
 
	(1) ಪ್ರಪಂಚದಾದ್ಯಂತ ತುಪ್ಪಳ ಉದ್ಯಮ ಹೊಸ ಪ್ರದೇಶಗಳ ಅನ್ವೇಷಣೆಗೆ ಉತ್ತೇಜನ ಕೊಟ್ಟಿತು. ತುಪ್ಪಳ ಪ್ರಾಣಿಗಳು ಸಂಪತ್ತಿನ ಒಂದು ಪ್ರಮುಖ ಮೂಲವಾಗಿ ಅವುಗಳ ಶೋಷಣೆ ನಡೆಯದಂತೆ, ಹೊಸ ಪ್ರದೇಶಗಳನ್ನು ಅನ್ವೇಷಣೆ ಮಾಡುತ್ತ ಹೋದಂತೆ, ಭೌಗೋಳಿಕ ಜ್ಞಾನ ಬೆಳೆÉಯುತ್ತ ಹೋಯಿತು. 
	(2) ತುಪ್ಪಳ ಉದ್ಯಮ ಯುರೋಪಿನ ನಾಗರಿಕತೆಯ ವಿಕಾಸ ಮತ್ತು ವಿಸ್ತರಣೆಯ ಪ್ರಮುಖ ಕರ್ತೃ.
	(3) ತುಪ್ಪಳ ಉದ್ಯಮ ಯೂರೋಪ್ ಮತ್ತು ಮೂಲನಿವಾಸಿ ಸಂಸ್ಕøತಿಗಳ ಸಂಮ್ಮಿಲನದ ರಮುಖ ಕರ್ತೃ.
	(4) ಕೊನೆಯದಾಗಿ ತುಪ್ಪಳ ಉದ್ಯಮ ಅಂತರಾಷ್ಟ್ರೀಯ ಯುದ್ಧಗಳಲ್ಲೂ ಗನೀಯ ಪಾತ್ರ ವಹಿಸಿದ್ದು ಗಮನಾರ್ಹ. ಇಲ್ಲಿ ಚಾರಿತ್ರಿಕವಾಗಿ ಹೆಸರಿಸಬಹುದಾದ್ದು ಕೆನಡದಲ್ಲಿ ಆಂಗ್ಲೊ-ಫ್ರೆಂಚ್ ಕದನ. ಅಮೆರಿಕನ್ನರ ಮತ್ತು ಬ್ರಿಡಟಿಷರ ನಡುವೆ 1783ರ ಅನಂತರ ನಡೆದ ತಿಕ್ಕಾಟ ಮತ್ತು ರಷ್ಯನರು ಬ್ರಿಟನ್ ಮತ್ತು ಅಮೆರಿಕನ್ನರು ಉತ್ತರ ಪೆಸಿಫಿಕ್‍ನಿಂದ ಓಡಿಸಿದ್ದು ಇತ್ಯಾದಿ.

	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
										(ಎಚ್.ಬಿ.ಡಿ.)